Vodafone Idea: ದೇಶದಲ್ಲಿ ವೈಫೈ ಕಾಲಿಂಗ್ ಪರಿಚಯಿಸಲು ಮುಂದಾದ ವೊಡಾಫೋನ್ ಐಡಿಯಾ
ದೇಶದ ಪ್ರಮುಖ ಖಾಸಗಿ ಟೆಲಿಕಾಂ ಸೇವಾದಾರ ಸಂಸ್ಥೆ ವೊಡಾಫೋನ್ ಐಡಿಯಾ ವಿ, ಬಳಕೆದಾರರಿಗೆ ವೈಫೈ ಕಾಲಿಂಗ್ ಫೀಚರ್ ಪರಿಚಯಿಸಲು ಮುಂದಾಗಿದೆ. ಆರಂಭಿಕ ಹಂತದಲ್ಲಿ ದೇಶದ ಎರಡು ಟೆಲಿಕಾಂ ಸರ್ಕಲ್‌ಗಳಲ್ಲಿ ವೈಫೈ ಕಾಲಿಂಗ್ ಫೀಚರ್ ದೊರೆಯಲಿದೆ. ಈಗಾಗಲೇ ದೇಶದಲ್ಲಿ ಏರ್‌ಟೆಲ್ ಮತ್ತು ರಿಲಯನ್ಸ್ ಜಿಯೋ ಬಳಕೆದಾರರಿಗೆ ವೈಫೈ ಕಾಲಿಂಗ್ ಫೀಚರ್ ಪರಿಚಯಿಸಿವೆ.
ವೊಡಾಫೋನ್ ಐಡಿಯಾ
ಪ್ರಸ್ತುತ ವೊಡಾಫೋನ್ ಮತ್ತು ಐಡಿಯಾ ನೆಟ್‌ವರ್ಕ್ ದೇಶದಲ್ಲಿ ಸಂಯೋಜನೆಗೊಂಡು, ವಿ ಹೆಸರಿನಲ್ಲಿ ಗ್ರಾಹಕರಿಗೆ ಸೇವೆ ನೀಡುತ್ತಿದೆ. ಹೊಸ ರೂಪದಲ್ಲಿ ಮತ್ತು ಬ್ರ್ಯಾಂಡಿಂಗ್ ಮೂಲಕ ಗ್ರಾಹಕರನ್ನು ಸೆಳೆಯಲು ಮುಂದಾಗಿವೆ. ಹೀಗಾಗಿ ವೈಫೈ ಕಾಲಿಂಗ್‌ನಂತಹ ಹೊಸ ಫೀಚರ್‌ಗಳನ್ನು ಬಳಕೆದಾರರಿಗೆ ನೀಡಲು ವೊಡಾಫೋನ್ ಐಡಿಯಾ ಮುಂದಾಗಿದೆ.
ವೈಫೈ ಕಾಲಿಂಗ್
ಆರಂಭಿಕ ಹಂತದಲ್ಲಿ ಕೋಲ್ಕತಾ, ಮಹಾರಾಷ್ಟ್ರ ಮತ್ತು ಗೋವಾ ಟೆಲಿಕಾಂ ಸರ್ಕಲ್‌ಗಳಲ್ಲಿ ವೊಡಾಫೋನ್ ಐಡಿಯಾ ವೈಫೈ ಕಾಲಿಂಗ್ ಸೇವೆ ಒದಗಿಸುತ್ತಿದೆ. ಮುಂದೆ, ಇತರ ಟೆಲಿಕಾಂ ಸರ್ಕಲ್‌ಗಳಿಗೂ ಸೇವೆ ವಿಸ್ತರಿಸಲಿದೆ. ಅಲ್ಲದೆ, ಈಗಾಗಲೇ ಕಳೆದ ಸುಮಾರು 1 ವರ್ಷದಿಂದ ಏರ್‌ಟೆಲ್ ಮತ್ತು ರಿಲಯನ್ಸ್ ಜಿಯೋ ದೇಶದಲ್ಲಿ ವೈಫೈ ಕಾಲಿಂಗ್ ಸೇವೆ ನೀಡುತ್ತಿವೆ.
ಏನಿದು ವೈಫೈ ಕಾಲಿಂಗ್?
ನೆಟ್‌ವರ್ಕ್ ಬಲಿಷ್ಠವಾಗಿಲ್ಲದ ಮತ್ತು ಹೆಚ್ಚು ಸಾಮರ್ಥ್ಯ ಹೊಂದಿಲ್ಲವಾದರೆ, ಅಂತಹ ಸಂದರ್ಭದಲ್ಲಿ ವೈಫೈ ಬಳಸಿಕೊಂಡು, ಸಾಮಾನ್ಯ ಕರೆಯನ್ನು ವೈಫೈ ಮೂಲಕ ಮಾಡಬಹುದಾಗಿದೆ. ಅದಕ್ಕಾಗಿ, ಹೊಸ ವ್ಯವಸ್ಥೆಯನ್ನು ಗ್ರಾಹಕರಿಗೆ ಪರಿಚಯಿಸಲು ವೊಡಾಫೋನ್ ಐಡಿಯಾ ಮುಂದಾಗಿದೆ.