ನೈತಿಕವಲ್ಲದ ಕಂಟೆಂಟ್ ಹೊಂದಿದೆ ಎಂಬ ಕಾರಣ ನೀಡಿ ಪಾಕಿಸ್ತಾನ ಟಿಂಡರ್ ಮತ್ತು ಗ್ರಿಂಡರ್ ಸಹಿತ ಐದು ಡೇಟಿಂಗ್ ಆ್ಯಪ್‌ಗಳನ್ನು ಬ್ಯಾನ್ ಮಾಡಿದೆ. ಸ್ಥಳೀಯ ಸರಕಾರದ ನಿಯಮವನ್ನು ಡೇಟಿಂಗ್ ಆ್ಯಪ್‌ಗಳು ಪಾಲಿಸುತ್ತಿಲ್ಲ ಎಂದು ದೂರಲಾಗಿದ್ದು, ಆನ್‌ಲೈನ್‌ನಲ್ಲಿ ನಡೆಯುವ ಆ್ಯಪ್‌ ಕಾರ್ಯಾಚರಣೆಯನ್ನು ನಿರ್ಬಂಧಿಸಲು ಕ್ರಮ ಕೈಗೊಳ್ಳುತ್ತಿರುವುದಾಗಿ ಹೇಳಿದೆ.

ಪಾಕಿಸ್ತಾನ ಟೆಲಿಕಮ್ಯೂನಿಕೇಶನ್ ಅಥಾರಿಟಿ ಟಿಂಡರ್, ಗ್ರಿಂಡರ್, ಟ್ಯಾಗ್‌ಡ್, ಸ್ಕೌಟ್ ಮತ್ತು ಸೇಹೈ ಎನ್ನುವ ಐದು ಆ್ಯಪ್‌ಗಳನ್ನು ನಿಷೇಧಿಸಿದೆ. ಈ ಸಂಬಂಧ ಆ್ಯಪ್‌ ಕಂಪನಿಗೆ ನೋಟಿಸ್ ಜಾರಿ ಮಾಡಿದ್ದು, ಕಂಟೆಂಟ್‌ನಲ್ಲಿ ಅನಗತ್ಯ ವಿಚಾರಗಳನ್ನು ಸೇರಿಸಿರುವುದರಿಂದ, ಈ ಕ್ರಮ ಕೈಗೊಳ್ಳುತ್ತಿದ್ದೇವೆ ಎಂದು ಹೇಳಿದೆ.

ಈ ಕುರಿತು ರಾಯಿಟರ್ಸ್ ವರದಿ ಮಾಡಿದ್ದು, ನಿರ್ಬಂಧ ಕುರಿತು ಆ್ಯಪ್‌ ಕಂಪನಿಗಳು ಯಾವುದೇ ಹೇಳಿಕೆ ನೀಡಿಲ್ಲ.

ಅಲ್ಲದೆ, ಸೆನ್ಸರ್ ಟವರ್ ವರದಿ ಪ್ರಕಾರ ಟಿಂಡರ್ ಆ್ಯಪ್‌ ಪಾಕಿಸ್ತಾನದಲ್ಲಿ ಕಳೆದ ಒಂದು ವರ್ಷದಲ್ಲಿ 4,40,000 ಬಾರಿ ಡೌನ್‌ಲೋಡ್ ಆಗಿದೆ. ಉಳಿದ ಡೇಟಿಂಗ್ ಆ್ಯಪ್‌ ಕೂಡ ಅತ್ಯಂತ ಹೆಚ್ಚಿನ ಡೌನ್‌ಲೋಡ್ ಮತ್ತು ಬಳಕೆ ದಾಖಲಿಸಿದೆ.

You Might Also Like

" data-numposts="10" data-width="">