ಕೋವಿಡ್ ನಿಯಂತ್ರಿಸುವ ಸಿಎಂ ಆದಿತ್ಯನಾಥ್ ಪ್ರಯೋಗ ವಿಫಲ: ಉತ್ತರಪ್ರದೇಶ ಬಿಜೆಪಿ ಶಾಸಕ ಟೀಕೆ
ಲಕ್ನೊ: ಕ್ಷಿಪ್ರವಾಗಿ ಹಬ್ಬುತ್ತಿರುವ ಕೋವಿಡ್-19 ಸೋಂಕನ್ನು ರಾಜ್ಯ ಸರಕಾರ ನಿರ್ವಹಿಸುತ್ತಿರುವ ರೀತಿಯನ್ನು ಉತ್ತರ ಪ್ರದೇಶದ ಬೈರಿಯಾ ಕ್ಷೇತ್ರದ ಬಿಜೆಪಿ ಶಾಸಕ ಸುರೇಂದ್ರ ಸಿಂಗ್ ಅವರು ಶುಕ್ರವಾರ ಟೀಕಿಸಿದ್ದಾರೆ ಎಂದು ವರದಿಯಾಗಿದೆ.
ಮುಖ್ಯಮಂತ್ರಿ ಆದಿತ್ಯನಾಥ್ ಅವರು ಅಧಿಕಾರಶಾಹಿಯ ಸಹಾಯದಿಂದ ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸುವ ಪ್ರಯೋಗವು ವಿಫಲವಾಗಿದೆ ಎಂದು ಹೇಳಿದ್ದಾರೆ.
ಬಿಜೆಪಿಯ ಸಚಿವರು ಹಾಗೂ ಶಾಸಕರು ಕೊರೋನ ವೈರಸ್ ಸೋಂಕಿಗೆ ಒಳಗಾಗುತ್ತಿದ್ದಾರೆ. ಅವರಿಗೆ ಸರಿಯಾದ ಚಿಕಿತ್ಸೆ ಪಡೆಯಲು ಸಾಧ್ಯವಾಗದಿರುವುದು ರಾಜ್ಯದ ವ್ಯವಸ್ಥೆಯ ನ್ಯೂನತೆ ಎಂದು ಪರಿಗಣಿಸಲಾಗುವುದು. ಚಿಕಿತ್ಸೆಯ ಕೊರತೆಯಿಂದ ಬಿಜೆಪಿ ಸಚಿವರು ಹಾಗೂ ಶಾಸಕರು ಸಾಯುತ್ತಿದ್ದಾರೆ. ವ್ಯವಸ್ಥೆಯನ್ನು ಚುನಾಯಿತ ಪ್ರತಿನಿಧಿಗಳನ್ನು ಕೇಂದ್ರೀಕರಿಸಿ ಇರಬೇಕು. ಅಧಿಕಾರಶಾಹಿ ಕೇಂದ್ರೀತವಾಗಿರಬಾರದು ಎಂದು ಸಿಂಗ್ ತಮ್ಮ ನಿವಾಸದಲ್ಲಿ ಸುದ್ದಿಗಾರರಿಗೆ ತಿಳಿಸಿದರು.
Source: Varthabharthi
" data-numposts="10" data-width="">