ನವದೆಹಲಿ: ಭಾರತದಲ್ಲಿ ಮೊಬೈಲ್​ ಫೋನ್​ ಬಳಕಕೆದಾರರ ಸಂಖ್ಯೆಯಲ್ಲಿ ಭಾರಿ ಇಳಿಕೆ ಕಂಡುಬಂದಿದೆ. ಎರಡು ತಿಂಗಳ ಅವಧಿಯಲ್ಲಿ ಅಂದಾಜು 1.48 ಕೋಟಿ ಬಳಕೆದಾರರು ಕಡಿಮೆಯಾಗಿದ್ದಾರೆ ಎಂದು ಲೆಕ್ಕ ಹಾಕಲಾಗಿದೆ. ಸಂಶೋಧನೆ ಹಾಗೂ ಸಮೀಕ್ಷಾ ಸಂಸ್ಥೆಯೊಂದು ಈ ವರದಿ ನೀಡಿದೆ.

ಇಂಡಿಯಾ ರೇಟಿಂಗ್​ ಆ್ಯಂಡ್​ ರಿಸರ್ಚ್​ ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ ಈ ಮಾಹಿತಿ ಕಲೆ ಹಾಕಲಾಗಿದೆ. ಭಾರತದಲ್ಲಿ ಮೊಬೈಲ್​ ಹಾಗೂ ಲ್ಯಾಂಡ್​ಲೈನ್​ ಬಳಕೆದಾರರ ಸಂಖ್ಯೆಯಲ್ಲಿ ಭಾರಿ ಕುಸಿತ ಮುಂದುವರಿದಿದೆ. ಅದರಲ್ಲೂ ಕೋವಿಡ್​ ಮಹಾಮಾರಿ ಟೆಲಿಕಾಂ ಕ್ಷೇತ್ರದ ಮೇಲೆ ಭಾರಿ ಪರಿಣಾಮವನ್ನೇ ಉಂಟು ಮಾಡಿದೆ ಎಂದು ವರದಿ ಹೇಳಿದೆ.
ಎಪ್ರಿಲ್​ನಲ್ಲಿ 82 ಲಕ್ಷ ಬಳಕೆದಾರರು ಕಡಿಮೆಯಾಗಿದ್ದಾರೆ ಎಂದು ಲೆಕ್ಕ ಹಾಕಲಾಗಿತ್ತು. ಇದೇ ರೀತಿ, ಮೇ ತಿಂಗಳಲ್ಲೂ ಇಳಿಕೆ ಮುಂದುವರಿದು ಮತ್ತೆ 56 ಲಕ್ಷ ಬಳಕೆದಾರರು ಕಡಿಮೆಯಾಗಿದ್ದಾರೆ ಎಂಬುದು ಗೊತ್ತಾಗಿದೆ.

ಮೊಬೈಲ್​ ಬಳಕೆ ಮಾತ್ರವಲ್ಲದೇ, ಇಂಟರ್​ನೆಟ್​, ವೈರ್​​ಲೆಸ್​ ಇಂಟರ್​ನೆಟ್​ ಬಳಕೆದಾರರ ಸಂಖ್ಯೆ ಕೂಡ ಕುಸಿದಿದೆ. ಲಾಕ್​​ಡೌನ್​ ಸಮಯಕ್ಕೆ ಹೋಲಿಸಿದಲ್ಲಿ ಇನ್ನೂ ಕೆಳಕ್ಕಿಳಿದಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಕರೊನಾ ಸಂಕಷ್ಟದ ಕಾರಣದಿಂದಾಗಿ ನಗರಪ್ರದೇಶಗಳಲ್ಲಿ ಉದ್ಯೋಗ ಕಂಡುಕೊಂಡಿದ್ದ ಜನರೆಲ್ಲ ತಮ್ಮೂರುಗಳಿಗೆ ಮರಳಿದ್ದರಿಂದ ಮೊಬೈಲ್​ ಬಳಕೆಯಿಂದ ದೂರವೇ ಉಳಿದಿದ್ದಾರೆ. ಉದ್ಯೋಗ ಕಡಿತ, ಆದಾಯ ಕುಸಿತ ಮೊದಲಾದ ಕಾರಣಗಳಿಂದ ಹೆಚ್ಚುವರಿ ಮೊತ್ತ ಭರಿಸಲಾಗದೆ ಟೆಲಿಕಾಮ್​ ಬಳಕೆದಾರರು ಕಡಿಮೆಯಾಗಿದ್ದಾರೆಂದು ವಿಶ್ಲೇಷಿಸಲಾಗಿದೆ.
ಬಳಕೆದಾರರ ಸಂಖ್ಯೆಯಲ್ಲಿ ಇಳಿಕೆಯಾಗಿರುವುದನ್ನು ದೂರ ಸಂಪರ್ಕ ನಿಯಂತ್ರಣ ಮಂಡಳಿ (ಟ್ರಾಯ್​) ಕೂಡ ಪುಷ್ಠೀಕರಿಸಿದೆ.

You Might Also Like

" data-numposts="10" data-width="">